ಅರಿಶಿನ

ಅರಿಶಿನಕ್ಕೆ ಬಣ್ಣಗಳ ರಾಣಿಯನ್ನು ಎನ್ನಬಹುದು ಇದರ ಉಪಯೋಗ ಸರ್ವವ್ಯಾಪಿ ಇದರ ಬಣ್ಣ ವಾಸನೆ ಎಲ್ಲವೂ ಸುಂದರ ಎಲ್ಲರಿಗಿಂತ ಹಸಿ ಅರಿಶಿನ ಕೊಂಬಿನ ಬಣ್ಣ ಮತ್ತು ಸುಂದರ

ಹಸಿ ಅರಿಶಿನ ಕೊಂಬಿನ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖದ  ಬಣ್ಣ  ಬಿಳಿಯಾಗುತ್ತದೆ ದಿನಾಲೂ ಬೆಳಿಗ್ಗೆ ಹಸಿ ಅರಿಶಿನ ಕೊಂಬಿನ ಚಿಕ್ಕ ಚೂರನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು ಇದು ಜ್ವರಕ್ಕೆ ಅಲರ್ಜಿಗೆ ಬರುತ್ತದೆ ಅರಿಸಿನವನ್ನು ಸೋಪ್ ತಯಾರಿಕೆಯಲ್ಲಿ ಫೇಸ್ ಕ್ರೀಮ್ ಕೆಮ್ಮಿಗೆ ಆಯುರ್ವೇದ ಔಷಧಗಳಲ್ಲಿ ಬಳಸುತ್ತಾರೆ ನೆಗಡಿಗೆ ಅಂತೂ ಅರಿಶಿನವು ತುಂಬಾ ಒಳ್ಳೆಯದು ನೆಗಡಿ ಆದವರಿಗೆ ಅರಿಸಿನದ ಹೊಗೆ ಅರಿಶಿನದ ನೀರನ್ನು ಕುಡಿಯಬೇಕು ಡಯಾಬಿಟೀಸ್ ನವರಿಗೆ ಕೂಡ ಇದು ಒಳ್ಳೆಯದು

 

ಹಿಂದುಸ್ತಾನದಲ್ಲಿ ಮಹಿಳೆಯರು ದಿನಾಲು ಸ್ನಾನವಾದ ನಂತರ ಕೆನ್ನೆಗೆ ಅರಿಶಿನ ಹಚ್ಚಿ ಹಣೆಗೆ ಅರಿಸಿನ ದಿಂದ ಮಾಡಿದ ಕುಂಕುಮವನ್ನು ಹಚ್ಚುತ್ತಾರೆ ದಿನಾಲೂ ಬೆಳಿಗ್ಗೆ ದೇವರ ಮುಂದೆ ಬಾಗಿಲ ಪಟ್ಟಿಗಳಿಗೆ ರಂಗೋಲಿ ಅದಕ್ಕೆ ಅರಿಶಿನ-ಕುಂಕುಮವನ್ನು ಹಾಕುತ್ತಾರೆ ಎಲ್ಲಾ ಪೂಜೆಗಳಲ್ಲೂ ಅರಿಸಿನ-ಕುಂಕುಮ ಇರಲೇಬೇಕು ಅರಿಶಿನವು ಚರ್ಮವ್ಯಾಧಿಗೆ ಒಳ್ಳೆಯದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಡಯಾಬಿಟೀಸ್ ನವರಿಗೆ ಒಳ್ಳೆಯದು ಸಾಂಬಾರಿಗೆ ದಿನಾಲೂ ಅರಿಸಿನವನ್ನು ಹಾಕುತ್ತಾರೆ

ಭಾರತದಲ್ಲಿ ಮದುವೆ ಮಾಡುವಾಗ ಹುಡುಗ ಹುಡುಗಿಯನ್ನು ಅರಿಸಿನದ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ ಮದುವೆಯಾದ ನಂತರವೂ ಅರಿಸಿನವನ್ನು ಮೈಯಲ್ಲ ಹಚ್ಚುತ್ತಾರೆ ಸಾಂಬಾರು ವಸ್ತುಗಳಲ್ಲಿ ಅರಿಶಿನವು ತುಂಬಾ ಪ್ರಮುಖವಾಗಿದೆ ಅರಿಶಿನವು ಬಹು ಉಪಯೋಗಕಾರಿಯಾಗಿದೆ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಜ್ಯೂಸ್ ಹಸಿ ಅರಿಶಿನ ಕೊಂಬು ಎರಡು ಇಂಚು ತುಳಸಿಯಲ್ಲಿ ಆರರಿಂದ ಎಂಟು ದೂರ್ವೆ ಅರ್ಧ ಮುಷ್ಟಿ ಚಿಕ್ಕ ಶುಂಠಿ ಚೂರು ಇವೆಲ್ಲವನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ ಸ್ವಲ್ಪ ಬೆಲ್ಲ ಮತ್ತು ನಿಂಬೆರಸವನ್ನು ಹಾಕಿ ಕುಡಿಯಬೇಕು ದಿನಾಲು ಈ ರೀತಿ ಕುಡಿದರೆ ಎಷ್ಟೇ ಹಳೆಯ ನೆಗಡಿ ಶರೀರದಲ್ಲಿರುವ ಅನೇಕ ದೋಷಗಳು ಹೋಗುತ್ತವೆ ಇದಕ್ಕೆ ಜೇನು ತುಪ್ಪ ಹಾಕಿಕೊಂಡು ಕುಡಿದರೆ ಮತ್ತು ಒಳ್ಳೆಯದು ಆದರೆ ಜೇನುತುಪ್ಪ ಹಾಕಿ ಹಾಕುವಾಗ ನೀರು ತುಂಬಾ ಬಿಸಿ ಇರಬಾರದು ಶುಂಠಿಯನ್ನು ದಿನಾಲು ಹಾಕಬೇಕೆಂದು ಏನಿಲ್ಲ   ಏಕೆಂದರೆ ಉಷ್ಣ ಶರೀರ ದವರಿಗೆ ದಿನಾಲು ಶುಂಠಿ ಬೇಡ

                  .    ಎರಡನೆಯ ರೀತಿ  

ಜೀರಿಗೆ ಒಂದು ಚಮಚ, ಅರಿಶಿನ ಕೊಂಬು ಮೂರು ಇಂಚು ,ಮೆಣಸಿನ ಕಾಳು 1 ಚಮಚ, ತೆಂಗಿನ ತುರಿ ಅರ್ಧ ಕಪ,್ ಇವಿಷ್ಟನ್ನು ಬೀಸಬೇಕು ಅದಕ್ಕೆ ಒಂದು ಲೋಟ ಮಜ್ಜಿಗೆ ಅಥವಾ ನಿಂಬೆರಸ ರುಚಿಗೆ ತಕ್ಕಷ್ಟು ಉಪ್ಪು ಒಂದು ಚಮಚ ಬೆಲ್ಲ ಹಾಕಿ ನಾಲ್ಕು ಲೋಟ ಮಾಡಬೇಕು ಇಷ್ಟು ಮಾಡಿದರೆ ಜ್ಯೂಸ್ ರೆಡಿ ಆಯಿತು

 

ಅರಿಸಿನವನ್ನು ಚಟ್ನಿಯಾಗಿ ಉಪಯೋಗಿಸಬಹುದು ಇದಕ್ಕೆ 5 ಇಂಚು ಅರಿಶಿನ ಕೊಂಬು, ತೆಂಗಿನಕಾಯಿ ತುರಿ ಒಂದು ಕಪ್ ಹುಣಸೆಹಣ್ಣು ಅಥವಾ ಅರ್ಧ ಕಡಿ ನಿಂಬು ರಸ, ಕಾರಕ್ಕೆ ಒಣಮೆಣಸು ಅಥವಾ ಹಸಿಮೆಣಸು 5 ಅಥವಾ ಆರು ಇವಿಷ್ಟನ್ನೂ ಬಿಸಿ ಅದಕ್ಕೆ ಉಪ್ಪು ಒಂದು ಚಮಚ ಬೆಲ್ಲ ಹಾಕಿದರೆ ಚಟ್ನಿ ರೆಡಿ ಇದನ್ನು ರೊಟ್ಟಿಗೆ ಅಥವಾ ಊಟಕ್ಕೆ ಬಳಸಬಹುದು.

Leave a Reply