ಎಳ್ಳಿನ ಜ್ಯೂಸ್

ಕೀರ್ತಿ ಚಿಕ್ಕದಾದರೂ ಮೂರ್ತಿ ದೊಡ್ಡದು ಎಂಬಂತೆ ಎಳ್ಳು ಚಿಕ್ಕದಿದ್ದರೂ ಅದರ ಶಕ್ತಿ ತುಂಬಾ ಉಪಯೋಗಕಾರಿಯಾಗಿದೆ .ಎಳ್ಳು ಡಯಾಬಿಟಿಸ್ ಹಾರ್ಟ್ ಪ್ರಾಬ್ಲಮ್. ನೆಗಡಿಗೆ ಉಪಯೋಗಕಾರಿ ದಿನಾಲೂ 3 ಚಮಚ ಅಂದರೆ 30 ಗ್ರಾಂ ಎಳ್ಳನ್ನು ತಿನ್ನಬೇಕು ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಇದರಲ್ಲಿ ಪ್ರೋಟೀನ್ ಇದೆ ಇದು ಲೋ ಬಿಪಿಗೆ ಒಳ್ಳೆಯದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೋಯಿಂಟ್ ಪೇನ್ ಕಡಿಮೆಮಾಡುತ್ತದೆ ಇದರಲ್ಲಿ ನ್ಯೂಟ್ರಿಯೆಂಟ್ಸ್ ಸೆಲೆನಿಯಮ್ ಕಬ್ಬಿನ ಕಾಪರ್ ಜಿಂಕ್ ವಿಟಮಿನ್ ಬಿ ಸಿಕ್ಸ್ ಇರುವುದರಿಂದ ಥೈರಾಯಿಡ್ಗೆ ಒಳ್ಳೆಯದು ಸ್ತ್ರೀಯರಿಗೆ ಮೆನೋಪಾಸ್ ವೇಳೆಯಲ್ಲಿ ಆಗುವ ತೊಂದರೆಗಳಿಗೆ ಇದು ಒಳ್ಳೆಯದು

ಆದರೆ ಕೆಲವರಿಗೆ ಎಳ್ಳು ತಿಂದರೆ ಅಲರ್ಜಿ ಆಗುವ ಸಂಭವ ಇರುತ್ತದೆ ಅವರಿಗೆ ತಲೆನೋವು ಅಥವಾ ಉಸಿರಿನ ತೊಂದರೆ ಅಥವಾ ಮೈಮೇಲೆ ಹುಗುಳು ಆಗುತ್ತದೆ ಎಳ್ಳು ತಿಂದಾಗ ಇವು ಯಾವುದಾದರೂ ಸಮಸ್ಯೆ ಕಂಡು ಬಂದರೆ ಅಂಥವರು ಎಳ್ಳನ್ನು ತಿನ್ನಬಾರದು

ಬೇಕಾಗುವ ಸಾಮಾನುಗಳು

ಎಳ್ಳು ಒಂದು ಲೋಟ ಏಲಕ್ಕಿ ಎರಡರಿಂದ ನಾಲ್ಕು ತೆಂಗಿನ ಸುಳಿ ಅಥವಾ ತೆಂಗಿನ ಹಾಲು 1 ಲೋಟ ತೆಂಗನ್ನು ಹಾಕಲೇ ಬೇಕಾಗಿಲ್ಲ ಬೆಲ್ಲ ಒಂದು ಲೋಟ ಅಥವಾ ರುಚಿಗೆ ತಕ್ಕಷ್ಟು ನಿಂಬು ರಸ 4 ಚಮಚ ಮಾಡುವ ವಿಧಾನ

ಎಳ್ಳನ್ನು ಒಂದು ತಾಸು ನೀರಿನಲ್ಲಿ ನೆನೆಸಿಡಬೇಕು ಅದಕ್ಕೆ ಏಲಕ್ಕಿ ಹಾಕಿ ಮಿಕ್ಸಿ ಅಥವಾ ಜ್ಯೂಸರ್ ನಲ್ಲಿ ಬೀಸಬೇಕು ಇದಕ್ಕೆ ಬೆಲ್ಲ ಹಾಕಿ ರುಚಿಗೆ ತಕ್ಕಷ್ಟು ನೀರು ಅಂದರೆ ಎರಡು ಲೋಟ ಜ್ಯೂಸನ್ನು ಮಾಡಬಹುದು ಇದಕ್ಕೆ ತೆಂಗಿನ ಹಾಲನ್ನು ಬೇಕಾದರೆ ಹಾಕಬಹುದು ಅಥವಾ ಹಾಲನ್ನು ಹಾಕಬಹುದು ಎಳ್ಳಿನ ಜ್ಯೂಸ್ ದೇಹಕ್ಕೆ ಮತ್ತು ಮನಸ್ಸಿಗೆ ತಂಪು ತಂಪು.

Leave a Reply