ಕರೋನವೈರಸ್ ತಡೆಗೆ

ಈಗ ಜಗತ್ತಿನಲ್ಲಿ ಕರೋನವೈರಸ್ ತೊಂದರೆ ಉಂಟು ಮಾಡುತ್ತಿರುವ ಈ ಸಂದರ್ಭದಲ್ಲಿ ಯಾವುದಾದರೂ ರೀತಿಯಲ್ಲಿ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಈ ವಿಚಾರ ನನಗೆ ಬಂದಿತ್ತು .

ಜಗತ್ತಿನಲ್ಲಿ ವಿವಿಧ ರೀತಿಯ ಆಹಾರ ಒಂದು ಫ್ಯಾಷನ್ ಆಗಿದೆ. ಅದರಲ್ಲಿ ರೆಡಿಮೇಡ್ ಆಹಾರ, ತಂಪಾದ ,ಬಿಸಿಯಾದ ,ಎಣ್ಣೆ ಇಲ್ಲದೆ ಎಣ್ಣೆ ಇರುವುದು ಹಣ್ಣು, ಧಾನ್ಯ ಸಸ್ಯಗಳು ಹೀಗೆ ಅನೇಕ ತರಹದ ಆಹಾರವನ್ನು ಜನರು ಇಷ್ಟಪಡುತ್ತಿದ್ದಾರೆ. ಆದರೆ ಪ್ರಾಣಿಗಳಲ್ಲಿ ಈ ರೀತಿ ಇಲ್ಲ ಅವರಿಗೆ ಈ ರೀತಿಯ ವಿವಿಧತೆಯ ಆಹಾರವನ್ನು ತಿನ್ನಲಿಕ್ಕೆ ಸಾಧ್ಯವಿಲ್ಲ. ಆದರೂ ಪ್ರಾಣಿಗಳು ನಮಗಿಂತ ಆರೋಗ್ಯ ಹೇಗೆ ?ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಇರಲೇಬೇಕು.

ಪ್ರಾಣಿಗಳು ನ್ಯಾಚುರಲ್ ಆಗಿ ಸಿಗುವಂತಹ ಆಹಾರವನ್ನು ಸೇವಿಸುತ್ತವೆ .ಕಾಡಿನಲ್ಲಿ ಸಿಗುವಂತಹ ಸೊಪ್ಪು ,ಹಣ್ಣು ,ಹೊಳೆಯಲ್ಲಿ ಸಿಗುವ ನೀರು, ಮಾಂಸಹಾರಿಗಳಿಗೆ ಕಾಡಿನ ಪ್ರಾಣಿಗಳು ಇವುಗಳೇ ಆಹಾರ

ಆದರೆ ಮಾನವ ತಾನೆ ಬೆಳೆದ ಆಹಾರ ಫಿಲ್ಟರ್ ನೀರು, ತಾನೇ ಬೆಳೆಸಿದ ಪ್ರಾಣಿಗಳ ಮಾಂಸ, ರಾಸಾಯನಿಕಯುಕ್ತ ಆಹಾರ ಇವುಗಳನ್ನು ಸೇವಿಸುತ್ತಾನೆ.

ಪ್ರಾಣಿಗಳು ಯಾವಾಗಲೂ ಕಾಡಿನೊಳಗೆ ವಾಸಿಸುತ್ತವೆ .ಅವರಿಗೆ ಇಷ್ಟವಾಗಿ ಗಾಳಿ-ಬೆಳಕು ಬಿಸಿಲು ಎಲ್ಲವೂ ಸಿಗುತ್ತದ. ಆದರೆ ಮಾನವನು ಕಟ್ಟಡದೊಳಗೆ ವಾಸಿಸುತ್ತಾನ. ಗಾಳಿ ಬೆಳಕು ಸ್ವಲ್ಪ ಸಿಕ್ಕರೂ ನೇರವಾದ ಬಿಸಿಲು ಅವನಿಗೆ ಸಿಗಲಾರದು. ಇಲ್ಲಿ ಕೃಷಿಕರಿಗೆ ಮಾತ್ರ ನೇರವಾದ ಬಿಸಿಲು ಸಿಗುತ್ತವೆ ಪ್ರಾಣಿಗಳು ಮತ್ತು ನಮ್ಮಲ್ಲಿ ಬಹುಮುಖ್ಯವಾದ ವ್ಯತ್ಯಾಸವಿರುವುದು ಪ್ರಾಣಿಗಳು ಯಥೇಷ್ಟವಾಗಿ ಬಿಸಿಲಲ್ಲಿ ಇರುತ್ತವೆ .ಆದರೆ ನಾವು ದಿನದಲ್ಲಿ ಎಷ್ಟು ಹೊತ್ತು ಬಿಸಿಲಲ್ಲಿ ಇರುತ್ತೇವೆ ?ಎಂಬುದು ಮುಖ್ಯ ಪ್ರಶ್ನೆಯಾಗಿದ.ಬಿಸಿಲನ್ನು ನಾವು ಅದು ಒಂದು ರೀತಿಯ ಆಹಾರ ಎಂದುತಿಳಿಯಬೇಕು. ಬಾಯಿಂದ ತೆಗೆದುಕೊಳ್ಳುವ ಆಹಾರದಷ್ಟೇ ಬಿಸಿಲು ಅಷ್ಟೇ ನಮ್ಮ ದೇಹಕ್ಕೆ ಮುಖ್ಯವಾಗಿದೆ .ಒಳ್ಳೆಯ ಆಹಾರವನ್ನು ಅಷ್ಟೇ ತೆಗೆದುಕೊಂಡರೆ ನಾವು ಸಾಲದು .ಅದರ ಜೊತೆಗೆ ಗಾಳಿ-ಬೆಳಕು ಬಿಸಿಲು ಎಲ್ಲವೂ ಬೇಕು. ನಾವು ಪರಿಪೂರ್ಣವಾದ ಆಹಾರವನ್ನು ತೆಗೆದುಕೊಂಡ ಹಾಗೆ ಆಯಿತು.

ನನ್ನ ಮುಖ್ಯವಾದ ಅಭಿಪ್ರಾಯವೇನೆಂದರೆ ಆಹಾರದ ವಿಚಾರದಲ್ಲಿ ಮೊದಲನೆಯ ಪ್ರಾಮುಖ್ಯತೆಯನ್ನು ನಾನು ಗಾಳಿ ಬಿಸಿಲು ಮತ್ತು ನೀರಿಗೆ ಕೊಡುತ್ತೇನೆ .ನಂತರದಲ್ಲಿ ಆಹಾರಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು. ಒಳ್ಳೆಯ ಗಾಳಿ ಬೆಳಕು ನೀರು ಇಲ್ಲದೆ ಎಷ್ಟೇ ಒಳ್ಳೆಯ ಆಹಾರ ತಿಂದರೂ ವ್ಯರ್ಥವೇ ಸರ.ಿ ಅದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಬಹಳಷ್ಟು ವೈರಸ್ಗಳು ಚಳಿಗಾಲದಲ್ಲಿ ಜಾಸ್ತ.ಿ ಏಕೆಂದರೆ ಆಗ ಬಿಸಿಲಿನ ಪ್ರಮಾಣ ಕಡಿಮೆ ಇರುತ್ತದೆ ಅಂದರೆ ಬಿಸಿಲಿನಲ್ಲಿ ಅವುಗಳ ಶಕ್ತಿ ಕಡಿಮೆಯಾಗುತ್ತದ. ಉಷ್ಣತೆಯಲ್ಲಿ ಅದರ ಉತ್ಪನ್ನ ಕಡಿಮೆ ಉದಾಹರಣೆಗೆ ಬಿಸಿಲಿನಲ್ಲಿ ಕೆಲಸಮಾಡುವ ಕಾರ್ಮಿಕರಿಗೆ ನೆಗಡಿಗೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಇರುತ್ತವೆ.

1920 ನೇ ಇಸವಿಯಲ್ಲಿ ಸ್ಪೇನ್ನಲ್ಲಿ ಸ್ಪ್ಯಾನಿಶ್ ಪ್ಯೂ ಬಂದಿತ್ತು .ಆಗ ಅಲ್ಲಿ ರೋಗಿಗಳನ್ನು ಬಿಸಿಲಿನಲ್ಲಿ ಮಲಗಿಸಿದಾಗ ಅದರತೀವ್ರತೆ ಕಡಿಮೆ ಆಯ್ತಂತೆ. ಅದರ ಅರ್ಥ ಬಿಸಿಲಿನಿಂದ ರೋಗನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತದೆ .ಯಾವುದೇ ನೆಗಡಿ ಕಫಕ್ಕೆ ಸಂಬಂಧಪಟ್ಟ ಕಾಯಿಲೆಗೆ ಔಷಧಗಳ ಜೊತೆಗೆ ಬಿಸಿಲು ಜೊತೆಗೆ ಬೇಕು ಆಗ ಅದು ಬಹಳ ಬೇಗ ಪರಿಣಾಮಕಾರಿಯಾಗುತ್ತದೆ ಅದರಿಂದ ನನ್ನ ಸಲಹೆ ಏನೆಂದರೆ ಕರೋನವೈರಸ್ ರೋಗಿಗಳಿಗೆ ಔಷಧಗಳ ಜೊತೆಗೆ ಬಿಸಿಲನ್ನು ಸೇವಿಸಲು ಸಲಹೆ ನೀಡಬೇಕು. ರೋಗಿಗಳಿಗೆ ಅವರವರ ಶಕ್ತಿಗೆ ತಡೆಯುವಷ್ಟು ಬಿಸಿಲನ್ನು ಅವರು ಸೇವಿಸಬೇಕು ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಅವರಲ್ಲಿ ರೋಗದ ತೀವ್ರತೆ ಕಡಿಮೆಯಾಗುತ್ತದೆ .

ೊನೆಯದಾಗಿ ನಾನು ಹೇಳುವುದೇನೆಂದರೆ ನಾವು ಆರೋಗ್ಯಕ್ಕಾಗಿ ಬಹಳಷ್ಟು ತಿನ್ನುವುದಕ್ಕಿಂತ ಸರಳವಾದ ನ್ಯಾಚುರಲ್ ಆದ ಆಹಾರ, ಬಿಸಿಲು, ನೀರು ಇವಷ್ಟೇ ಸಾಕು .ಆರೋಗ್ಯವಂತ ದೇಹ ಬೇಕೆಂದರೆ ದಿನಾಲು ಅರ್ಧ ಗಂಟೆಯಿಂದ ಒಂದು ತಾಸಾದರೂ ಬಿಸಿಲಿನಲ್ಲಿ ಸ್ವಲ್ಪವಾದರೂ ಬೆವರು ಬರುವಂತೆ ಕೆಲಸ ಮಾಡಬೇಕು.

ಸಾರಾಂಶ. ಯಾವುದೇ ವೈರಸ್ ಸಂಬಂಧಪಟ್ಟ ಉಸಿರಿನ ಕಾಯಿಲೆಗೆ ಔಷಧದ ಅಷ್ಟೇ ಪ್ರಾಮುಖ್ಯತೆ ಬಿಸಿಲು ಹೌದು ಅಂತಹ ರೋಗಿಗೆ ವೈದ್ಯರು ಬಿಸಿಲಿನಲ್ಲಿ ಮಲಗಲು ಅಥವಾ ಓಡಾಡಲು ಅಥವಾ ಗಟ್ಟಿಯಾಗಿದ್ದರೆ ಕೆಲಸ ಮಾಡಲು ಸಲಹೆ ನೀಡಬೇಕು. ಇದರಿಂದ ರೋಗನಿರೋಧಕ ಶಕ್ತಿ ಬರುತ್ತದೆ.

ಆಡು ಮುಟ್ಟದ ಸೊಪ್ಪು

ಇದು ಗಿಡವಾಗಿದ್ದು ಕಹಿಯಾದ ಉದ್ದ ನೆಲೆಯನ್ನು ಹೊಂದಿದೆ ಇದರ ಎಲೆಯು ತಂಡಿ ಜ್ವರಕ್ಕೆ ಸಂಬಂಧಪಟ್ಟ ಎಲ್ಲ ಕಾಯಿಲೆಗಳಿಗೂ ಬರುತ್ತದೆ ನನ್ನ ಮಗನು ಚಿಕ್ಕವನಿರುವಾಗ ಥಂಡಿ ಜ್ವರ ಪದೇ ಪದೇ ಬರುತ್ತಿತ್ತು ಆಗ ನಾನು ಇದರ ಎಲೆಯ ಕಷಾಯವನ್ನು ಮಾಡಿ ಕೊಡುತ್ತಿದೆ ಒಂದು ದಿವಸದಲ್ಲಿ ಜ್ವರವು ಕಡಿಮೆಯಾಗುತ್ತಿದ್ದಂತೆ ಜ್ವರದ ಗುಳಿಗೆಯನ್ನು ತೆಗೆದುಕೊಂಡರೆ ಜ್ವರವೂ ಕಡಿಮೆಯಾದ ನಂತರ ಕೆಮ್ಮು ಶುರುವಾಗುತ್ತಿತ್ತು ಕಫವು ಗಟ್ಟಿಯಾಗುತ್ತಿತ್ತು ಆದರೆ ಈ ಎಲೆಯ ಕಷಾಯವು ಕಫವನ್ನು ಕರಗಿಸುತ್ತದೆ ಎಲೆ ಕಷಾಯವನ್ನು ತೆಗೆದುಕೊಂಡರೆ ಜ್ವರ ಕಡಿಮೆ ಆದಮೇಲೆ ಕೆಮ್ಮು ಶುರುವಾಗುವುದು ಇಲ್ಲ ಆದ್ದರಿಂದ ಎಲ್ಲರೂ ತಮ್ಮ ಮನೆಗಳಲ್ಲಿ ಈ ಗಿಡವನ್ನು ನೆಡಬೇಕೆಂದು ನಾನು ಸಲಹೆ ಕೊಡುತ್ತೇನೆ ಇದರ ಗಿಡವು ಎಲ್ಲ ಪ್ರದೇಶಗಳಲ್ಲೂ ಆಗಬಹುದೆಂದು ನನ್ನ ಅಭಿಪ್ರಾಯ .

ಮಾಡುವ ರೀತಿ.

ಅರ್ಧ ಲೀಟರ್ ನೀರಿಗೆ 10 ಎಲೆಯನ್ನು ಎರಡು ಚಮಚ ಕೊತ್ತಂಬರಿಯನ್ನು ಹಾಕಬೇಕು ಸಣ್ಪ ಬೆಂಕಿಯಲ್ಲಿ 10 ನಿಮಿಷ ಕುದಿಯುತ್ತಾ ಇರಬೇಕು ನೀರು ಹಸಿರು ಬಣ್ಣ ಬಂದನಂತರ ಬೆಂಕಿಯನ್ನು ಆರಿಸಬೇಕು ಅದಕ್ಕೆ 2 ಚಮಚ ಬೆಲ್ಲವನ್ನು ಹಾಕಬೇಕು ಕಡಿಮೆ ಜ್ವರ ಇದ್ದರೆ ಕಾಲು ಲೋಟ ಕಷಾಯವನ್ನು 2:30 ತಾಸಿಗೊಮ್ಮೆ ಕೊಡಬೇಕು ಜ್ವರ ಜಾಸ್ತಿ ಇದ್ದರೆ ಅರ್ಧ ಲೋಟ ಕಷಾಯವನ್ನು ಕೊಡಬೇಕು ಜ್ವರ ಕಡಿಮೆಯಾದರೆ 4 ತಾಸಿಗೊಮ್ಮೆ ಕಷಾಯ ಕೊಟ್ಟರೆ ಸಾಕು

ಆಮೇಲೆ ಒಂದು ಲೀಟರ್ ನೀರಿಗೆ ಒಂದು ಮುಷ್ಟಿ ಕೊತ್ತಂಬರಿ ಹಾಕಿ ಕುದಿಸಬೇಕು ನೀರಡಿಕೆ ಆದಾಗಲೆಲ್ಲ ಕೊತ್ತಂಬರಿ ನೀರನ್ನು ಕುಡಿಸಬೇಕು ಇದರಿಂದ ಎಂಥ ಜ್ವರವು ಕೂಡ ಕಡಿಮೆಯಾಗುತ್ತದೆ ಕೊತ್ತಂಬರಿ ನೀರನ್ನು ಮೂರರಿಂದ ನಾಲ್ಕು ದಿವಸ ಹಗಲು ಮತ್ತು ರಾತ್ರಿ ಕುಡಿಯಬೇಕು

ರೋಗಿಯು ನಿದ್ದೆಯನ್ನು ಚೆನ್ನಾಗಿ ಮಾಡಬೇಕು. ನೀರನ್ನು ಅಥವಾ ಕೊತ್ತಂಬರಿ ನೀರನ್ನು ಜಾಸ್ತಿ ಕುಡಿಯಬೇಕು ದಿನಕ್ಕೆ ಒಂದು ತಾಸಾದರೂ ಬಿಸಿಲಿನಲ್ಲಿ ಇರಬೇಕು ಅಥವಾ ಓಡಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಂತೋಷವಾಗಿರಬೇಕು ಹೆದರಬಾರದು. ಇದರಿಂದ ತನ್ನಿಂದ ತಾನೇ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಅರಿಶಿನ ಪುಡಿ ಮತ್ತು ಉಪ್ಪು ಹಾಕಿದ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು. ಶುಂಠಿ ಹಸಿ ಅರಿಶಿನ ಕೊಂಬು ಮತ್ತು ಮೆಣಸಿನ ಕಾಳನ್ನು ಆಹಾರದಲ್ಲಿ ಯಾವುದಾದರೂ ರೀತಿಯಲ್ಲಿ ಸೇರಿಸಿ ತಿನ್ನಬೇಕು ಉದಾಹರಣೆಗೆ ಶುಂಠಿ ಚಟ್ನಿ ಅರಿಶಿನದ ಚಟ್ನಿ ಅಥವಾ ತಂಬಳಿ ಅಥವಾ ಸಾಂಬಾರಿನ ಜೊತೆಗೆ ಸೇರಿಸಬೇಕು.

Leave a Reply