ಗೋಧಿ ಹುಲ್ಲಿನ ಜ್ಯೂಸ್

ಗೋಧಿ ಹುಲ್ಲಿನ ರಸ ಆಶ್ಚರ್ಯಕರವಾದ ಉಪಯೋಗ ವನ್ನು ಹೊಂದಿದೆ.ಗೋಧಿ ಹುಲ್ಲನ್ನು ಮನೆಯಂಗಳ ದಲ್ಲಿ ಅಥವಾ ಕುಂಭಗಳಲ್ಲಿ ಬೆಳೆಯಬಹುದು.. ಗೋಧಿಯನ್ನು ಒಂದು ದಿನ ನೀರಲ್ಲಿ ನೆನೆಸಿ ನಂತರ ಮಣ್ಣಿನಲ್ಲಿ ಹಾಕಿದರೆ ಹತ್ತರಿಂದ ಹದಿನೈದು ದಿವಸಗಳಲ್ಲಿ ಗೋದಿ ಹುಲ್ಲು ಜ್ಯೂಸ್ ಗೆ ರೆಡಿಯಾಗುತ್ತದೆ.ಅದು ಅರ್ಧ ವೂಟ್ ಒಳಗೆ ಉದ್ದವಿದ್ದರೆ ಸಾಕು.

ಗೋಧಿ ಹುಲ್ಲಿನ ರಸ ಸಂಪೂರ್ಣ ಆಹಾರ ವೆನ್ನಬಹುದು. ಇದರಲ್ಲಿ ಕಬ್ಬಿಣ ಕ್ಯಾಲ್ಸಿಯಂ ಮೆಗ್ನೀಷಿಯಂ ಫೈಟೋನ್ಯೂಟ್ರಿಯೆಂಟ್ಸ್ ಸೆವೆಂಟೀನ್ ಅಮಿನೋ ಅಚಿಡ್ಸ್ ವಿಟಮಿನ್ಸ್ ಎ ಸಿ ಕೆ ಎಂಡ್ ಬಿ ಕಾಂಪ್ಲೆಕ್ಸ್ ಕ್ಲೋರೋಫಿಲ್ ಪ್ರೋಟೀನ್ ಇವೆಲ್ಲವೂ ಇರುವುದರಿಂದ ಆಹಾರವಾಗಿದೆ.ಇದು ದೇಹದಲ್ಲಿರುವ ಕಲ್ಮಶವನ್ನು ಹೋಗಲಾಡಿಸಿ ರಕ್ತವನ್ನು ಶುದ್ಧೀಕರಿಸುವುದು ರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೊಜ್ಜನ್ನು ಕರಗಿಸುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.ಇದು ಶಕ್ತಿಯುತವಾದ ಆಹಾರ ಟಾನಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ ಜೀರ್ಣಕಾರಿ . ಗ್ಯಾಸ್ಟ್ರಿಕ್ ,ಹೊಟ್ಟೆಯುಬ್ಬರ ,ಬಿಪ,ಿ ಅಲ್ಜಿಮರ್ ,ಡಯಾಬಿಟಿಸ್ ,ಸಂದಿವಾತ ಇವೆಲ್ಲವುಗಳಿಗೆ ಇದು ಒಳ್ಳೆಯ ಆಹಾರ ಮೆಂಟಲ್ ಪವರ್ ಗೆ ಇದು ಒಳ್ಳೆಯದು .ಆತಂಕವನ್ನು ಕಡಿಮೆ ಮಾಡುತ್ತದೆ ಸ್ಪೆಷಲ್ಲಾಗಿ ಕ್ಯಾನ್ಸರ್ಗೆ ಕೂಡ ಒಳ್ಳೆಯದು.

ಪ್ರಗ್ನೆಂಟ್ ಇದ್ದವರು ತೆಗೆದುಕೊಳ್ಳಬಾರದು. ಎದೆಹಾಲನ್ನು ಇದು ಕಡಿಮೆಮಾಡುತ್ತದೆ.

ಜ್ಯೂಸ್ ಮಾಡುವ ವಿಧಾನ

ಎಳೆಯದಾದ ಒಂದು ಮುಷ್ಟಿ ಗೋಧಿ ಹುಲ್ಲನ್ನು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು .ಗೋಧಿ ಹುಲ್ಲನ್ನು ಜ್ಯೂಸರ್ ನಲ್ಲಿ ಸ್ವಲ್ಪ ನೀರಿನೊಂದಿಗೆ ಹಾಕಿ ಬೀಸಬೇಕು. ಅದಕ್ಕೆ 2 ಚಮಚ ಜೇನುತುಪ್ಪ ಅರ್ಧ ಲೋಟ ನೀರು ಹಾಕಿ ದರೆ ಜ್ಯೂಸ್ ರೆಡಿ.

ಮತ್ತೊಂದು ವಿಧಾನ – ಗೋಧಿ ಹುಲ್ಲಿನ ಜ್ಯೂಸ್ ಗೆ 1 ಚಮಚ ಜೀರಿಗೆ,ಅರ್ಧ ಚಮಚ ಕಾಳು ಮೆಣಸು ಲೋಟ ತೆಂಗಿನ ಹಾಲನ್ನು ಕೂಡ ಹಾಕಬಹುದು ಅರ್ಥ ನಿಂಬು ರಸ ಹಾಕಬೇಕು.

Leave a Reply