ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಭಾರತೀಯ ಆಯುರ್ವೇದಿಕ ಔಷಧಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ ಭಾರತೀಯರು ನೆಲ್ಲಿಕಾಯಿಯನ್ನು ತುಳಸಿ ಗಿಡದ ಜೊತೆಗೆ ಪೂಜಿಸುತ್ತಾರೆ .ನೆಲ್ಲಿಕಾಯಿಯು ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .ಇದು ಕೆಟ್ಟ ವಯಸ್ಸು ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆಮಾಡುತ್ತದೆ.

ಇದು ನೆಗಡಿ ಮತ್ತು ಕಫಕ್ಕೆ ಔಷಧವಾಗಿದೆ. ಕ್ಯಾನ್ಸರ್ ಗಳನ್ನು ಕೊಲ್ಲುತ್ತದೆ. ಚರ್ಮ ಮತ್ತು ಕೂದಲು ಆರೋಗ್ಯವಾಗಿರುತ್ತದೆ ಬರುತ್ತದೆ

ಇದನ್ನು ನಿಯಮಿತವಾಗಿ ತೆಗೆದುಕೊಂಡರೆ ವೃದ್ಧಾಪ್ಯವನ್ನು ಮುಂದೂಡುತ್ತದೆ ಕಣ್ಣ ರೋಗವನ್ನು ಹೆಚ್ಚಿಸುತ್ತೆ .

ಇದು ಡಯಾಬಿಟಿಸ್ ಗೆ ಒಳ್ಳೆಯದು. ಡಯಾಬಿಟಿಸ್ ಇದ್ದವರು ನೆಲ್ಲಿಕಾಯಿ ಜೊತೆಗೆ ಹಾಗಲಕಾಯಿ ರಸವನ್ನು ಸೇರಿಸಿ ಬೆಳಿಗ್ಗೆ ಸೇವಿಸಬೇಕು.ಅಥವಾ ರಾತ್ರಿ ಮಲಗುವಾಗ ಸೇವಿಸಬೇಕು. ದಿನಾಲೂ ಬೆಳಿಗ್ಗೆ ನೆಲ್ಲಿಕಾಯಿ ರಸ 1 ಚಮಚ ಜೇನುತುಪ್ಪವನ್ನು ತೆಗೆದುಕೊಂಡರೆ ನೆಗಡಿ ಕೆಮ್ಮು ಕಡಿಮೆಯಾಗುತ್ತವೆ. ಮತ್ತು ವೃದ್ಧಾಪ್ಯ ಮುಂದೂಡುತ್ತದೆ .ನೆಲ್ಲಿಕಾಯಿಯನ್ನು ವಿವಿಧ ರೀತಿಯಲ್ಲಿ ಉಪಯೋಗಿಸಬಹುದು.ಜಾನ್ ಮಾಡಬಹುದು ಪಿನ ಕಾಯಿ ಮತ್ತು ಚಟ್ನಿಯನ್ನು ಮಾಡಬಹುದು. ನೆಲ್ಲಿಕಾಯಿ ಇಂದ ಹಿಂಡಿ ಮಾಡಿ ಅಜೀರ್ಣಕ್ಕೆ ಔಷಧವಾಗಿ ಬಳಕೆ ಮಾಡುತ್ತಾರೆ. ನೆಲ್ಲಿಕಾಯಿಯು ಎಲ್ಲಾ ವೇಳೆಯಲ್ಲಿ ಸಿಗದ ಕಾರಣ ಅದರ ರಸವನ್ನು ಫ್ರೀಜರ್ನಲ್ಲಿ ಇಟ್ಟುಕೊಳ್ಳಬಹುದು.

ನೆಲ್ಲಿಕಾಯಿ ಜ್ಯೂಸ್ ಮಾಡುವ ರೀತಿ

ಒಂದು ಲೋಟ ನೀರಿಗೆ ಎರಡು ಚಮಚ ನೆಲ್ಲಿಕಾಯಿ ರಸ ಎರಡು ಚಮಚೆ ಜೇನುತುಪ್ಪ ಹಾಕಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.ಇದನ್ನು ಸ್ವಲ್ಪ ಬಿಸಿಯಾಗಿ ಕುಡಿಯುವ ದಿದ್ದರೆ ಜೇನುತುಪ್ಪ ಹಾಕಬಾರದು. ಆಗ ಒಂದು ಚಮಚ ಬೆಲ್ಲವನ್ನು ಹಾಕಬಹುದು.

ಮಧ್ಯಾಹ್ನ ಊಟದ ಜೊತೆಗೆ.

ನಾಲ್ಕು ನೆಲ್ಲಿ ಕಾಯಿಯ ಚೂರುಗಳು 1 ಚಮಚ ಜೀರಿಗೆ ಒಂದು ಹುಟ್ಟು ತೆಂಗಿನಕಾಯಿಯ ಸುಳಿ ಅರ್ಧ ಚಮಚ ಮೆಣಸಿನ ಕಾಳು ಇವೆಲ್ಲವನ್ನೂ ನುಣ್ಣಗೆ ಬೀಸಿ ಅದಕ್ಕೆ ಮಜ್ಜಿಗೆ ಎನ್ನು ಹಾಕಬಹುದ. ಇದನ್ನು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು.ಎರಡು ಲೋಟ ಮಾಡಿಕೊಂಡು ಅನ್ನದ ಜೊತೆಗೆ ಅಥವಾ ಹಾಗೆ ಕುಡಿಯಬಹುದು.

ನೆಲ್ಲಿ ಕಾಯಿಯನ್ನು ಬೇಯಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಅದನ್ನು ಗ್ರೈಂಡರ್ ಮಾಡಬೇಕು.ನಂತರ ದಿನಾಲು ಬಿಸಿಲಿನಲ್ಲಿ ಒಣಗಿಸಬೇಕು ಅದು ಗಟ್ಟಿಯಾದ ನಂತರ ಗಾಜಿನ ಭರಣಿಯಲ್ಲಿ ಇಡಬೇಕು.ಇದು ವರ್ಷದವರೆಗೆ ಇಡಬಹುದು. ಇದನ್ನು ಅಜೀರ್ಣವಾದಾಗ ಅಥವಾ ಅಜೀರ್ಣದಿಂದ ಡಿಸೆಂಟ್ರಿ ಆದಾಗ ಒಂದು ಚಮಚ ನೆಲ್ಲಿಕಾಯಿ ಹೆರೆಂಡಿ ಜೊತೆಗೆ ಬೆಣ್ಣೆಯನ್ನು ಸೇರಿಸಿ ಅನ್ನದ ಜೊತೆಗೆ ಊಟ ಮಾಡಬೇಕು. ಕಡಿಮೆಯಾಗುತ್ತದೆ.

Leave a Reply