ಪೇಪರ್ ಮಿಂಟ್ ಜ್ಯೂಸ್ ಪುದೀನಾ ಸೊಪ್ಪು

ಪುದಿನಾ ಸೊಪ್ಪು ಚಿಕ್ಕ ಚಿಕ್ಕ ಎಲೆಗಳಿಂದ ಕೂಡಿದ ಚಿಕ್ಕ ಗಿಡವಾಗಿದೆ ಇದು ತುಂಬಾ ಸುವಾಸನೆ ಭರಿತವಾಗಿದೆ ಇದು ಜೀರ್ಣಕಾರಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ ಮೈಗ್ರೇನ್ ತಲೆನೋವಿಗೆ ಒಳ್ಳೆಯದು ಪೆಪ್ಪರ್ಮಿಂಟ್ ಆಯ್ಲ್ ಒಳ್ಳೆಯದು ಪುದಿನ ಸೊಪ್ಪಿನ ರಸ ಮೂಗು ಕಟ್ಟಿರುವುದನ್ನು ಕಡಿಮೆಮಾಡುತ್ತದೆ ಇದರ ಜ್ಯೂಸ್ ಹೆಂಗಸರಿಗೆ ತಿಂಗಳಿನ ಸಮಯದಲ್ಲಾಗುವ ನೋವನ್ನು ಕಡಿಮೆ ಮಾಡುತ್ತದೆ

ಬೇಕಾಗುವ ಸಾಮಾನುಗಳು

ಪುದಿನ ಎಲೆ ಒಂದು ಮುಷ್ಟಿ ಜೀರಿಗೆ 2 ಚಮಚ ಕರಿಮೆಣಸಿನ ಕಾಳು 1 ಚಮಚ ತೆಂಗಿನ ಹಾಲು ಅಥವಾ ತೆಂಗಿನತುರಿ 1 ಲೋಟ ಮಜ್ಜಿಗೆ ಅಥವಾ ನಿಂಬು ರಸ

ಮಾಡುವ ವಿಧಾನ

ಪುದೀನಾ ಎಲೆ ,ಜೀರಿಗೆ ಕರಿಮೆಣಸಿನ ಕಾಳು, ತೆಂಗಿನ ತುರಿ ಇವಿಷ್ಟನ್ನು ನುಣ್ಣಗೆ ಬೀಸಿ ಅದಕ್ಕೆ ಒಂದು ಲೋಟ ಮಜ್ಜಿಗೆ ಅಥವಾ ಅರ್ಧ ಕಡಿ ನಿಂಬು ರಸ ಹಾಕಬೇಕು .ಇದಕ್ಕೆ ಸ್ವಲ್ಪ ಉಪ್ಪು ಅಥವಾ ಬೆಲ್ಲ ಹಾಕಬಹುದು. ಇದನ್ನು ಬಿಸಿ ಮಾಡಿ ಕುಡಿಯುವದಾದರೆ ಅದಕ್ಕೆ ಮಜ್ಜಿಗೆ ಹಾಕಬಾರದು .ನಿಂಬೆರಸ ಹಾಕಬೇಕು .ಇಷ್ಟಾದರೆ ಜ್ಯೂಸ್ ರೆಡಿ

2 ನೇ ವಿಧಾನ    .                       

1 ಲೋಟ ನೀರಿಗೆ 8 ಪುದೀನಾ ಎಲೆಗಳನ್ನು ಹಾಕಿ ಕುದಿಸಿದರೆ ಪ್ರದೀನಾ ಟೀ ರೆಡಿ. ಇದಕ್ಕೆ ಶುಂಠಿ ಕೂಡ ಹಾಕಬಹುದು.. 1 ಚಮಚ ನಿಂಬು ರಸ ಹಾಕಬೇಕು .ಇದನ್ನು ದಿನ ಕುಡಿದರೆ ನೆಗಡಿ ಕಡಿಮೆ ಆಗುತ್ತದೆ.                   

ಪ್ರದೀವಾ ಸೊಪ್ಪನ್ನು ಅನೇಕ ಪಾನೀಯ ಗಳ ತಯಾರಿಕೆಯಲ್ಲಿ ಚಟ್ನಿ, ಸಾರು, ಸಾಂಬಾರ್, ರಸಂ ಕೋಸುಂಬರಿ, ಪಲಾವ್ ,ಮಾಂಸದ ಅಡಿಗೆಯಲ್ಲಿ ಬಳಸಬಹುದು. ಇದರಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶವಿದ್ದು ಶರೀರದ ಉಷ್ಣ್ಲತೆಯನ್ನು ಕಾಪಾಡಲು ನೆರವಾಗುತ್ತದೆ.

ಪುದೀನಾ ಸೂಪ್            

ಅರ್ಧ ಮುಷ್ಟಿ ಪುದೀನಾ, ಲವ0ಗ 2. ಬೆಳ್ಳುಳ್ಳಿ 1. ಕಾಳು ಮೆಣಸು 8 – 10 ,ಟೊಮಾಟಿ ಹಣ್ಣು 2. ರಿಂದ 4 ಇನಿಷ್ಟನ್ನು ನುಣ್ಣಿಗೆ ಬೀಸಿ ಕುದಿಸಿ ಅದಕ್ಕೆ 1 ಚಮಚ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಊಟದ ಮೊದಲು 1 ಕಪ್ ಕುಡಿದರೆ ಒಳ್ಳೆಯದು ( ಆಹಾರದ ಮೊದಲು) ಇವಿಷ್ಟು ಸಾಮಾನುಗಳಿಗೆ 4 ಕಪ್ ಸೂಪ್ ಮಾಡಬಹುದು.

ಪುದಿನಾ ಚಟ್ನಿ

ಬಂಡಿಗೆ 4 ಚಮಚ ಎಣ್ಣೆ ಹಾಕಿ ಸ್ವಲ್ಪ ಕಾಯಿಸಿ ಅದಕ್ಕೆ ಒಂದು ಮುಷ್ಟಿ ಪುದಿನಾ ಸೊಪ್ಪು ನಾಲ್ಕರಿಂದ ಆರು ಹಸಿಮೆಣಸು ಹಾಕಿ ಸ್ವಲ್ಪವೇ ಹುರಿಯಬೇಕು. ನಂತರ ಅದಕ್ಕೆ ಒಂದು ಚಮಚ ಉಪ್ಪು ಒಂದು ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು ಹಾಕಿ ಗಟ್ಟಿಯಾಗಿ ಬೀಸಬೇಕು ರುಚಿಯಾದ ಚಟ್ನಿ ರೆಡಿ .ಇದು ದೋಸೆಗೆ ರೊಟ್ಟಿಗೆ ರೊಟ್ಟಿಗೆ ಊಟಕ್ಕೂ ಆಗಬಹುದು.

Leave a Reply