ಮಧುಮೇಹಕ್ಕೆ ಮೆಂತ್ಯ (ಮೆಥಿ) ಅನ್ನು ಹೇಗೆ ಬಳಸುವುದು & ಪ್ರಯೋಜನಗಳು (ಟೇಸ್ಟಿ ವಿಧಾನಗಳು!)

ಅಧರಕ್ಕೆ ಕಹಿ ಉದರಕ್ಕೆ ಸಿಹಿ ಎಂಬ ಗಾದೆ ಮಾತಿನಂತೆ ಮೆಂತೆಯ ಗುಣವಾಗಿದೆ ಗರ್ಭಿಣಿಯರು ಮತ್ತು ಶಿಶು ಇವರನ್ನು ಬಿಟ್ಟರೆ ಎಲ್ಲರೂ ಮೆಂತೆಯನ್ನು ಬಳಸಬಹುದು ಆದರೆ ಮೆಂತೆಯನ್ನು ಉಳಿದ ಧಾನ್ಯಗಳ ರೀತಿಯಲ್ಲಿ ಬಳಸಲಿಕ್ಕೆ ಆಗುವುದಿಲ್ಲ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಳಸಬೇಕು

ಮೆಂತೆಯಲ್ಲಿ ಫೈಯರ್ಸ್ ಮಿನರಲ್ಸ್ ಐರನ್ ಮತ್ತು ಮೆಗ್ನೀಷಿಯಂ ಹೊಂದಿದೆ ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಂಟ್ರೋಲ್ನಲ್ಲಿ ಇಡುವುದರಿಂದ ಒಂದು ಮತ್ತು 2 ಡಯಾಬಿಟಿಕ್ ನವರಿಗೆ ಒಳ್ಳೆಯದು ಇವರು ಮೆಂತ್ಯೆಯನ್ನು ವಿವಿಧ ರೀತಿಯಲ್ಲಿ ಬಳಸುವುದು ವಿವಿಧ ರೀತಿಯ ಆಹಾರಗಳ ಜೊತೆಗೆ ಇದನ್ನು ಬಳಸಿದರೆ ಇದರ ಕಹಿಯಾದ ಗುಣವು ಮತ್ತು ಪರಿಮಳವೂ ರುಚಿಕರವಾಗಿ ಮಾರ್ಪಾಡಾಗುತ್ತದೆ ಇಲ್ಲಿ ನಾನು ಡಯಾಬಿಟಿಕ್ ಪೇಷಂಟ್ ನವರು ಯಾವ ಯಾವ ರೀತಿಯಲ್ಲಿ ರುಚಿಕರವಾಗಿ ಆಹಾರವನ್ನಾಗಿ ಮೆಂತೆಯನ್ನು ಬಳಸಬಹುದು ಎಂಬುದನ್ನು ತಿಳಿಸುತ್ತೇನೆ ಮುಕ್ತವಾಗಿ ಡಯಾಬಿಟಿಕ್ ನವರಿಗೆ ಎಲ್ಲರಂತೆ ತಾವು ಸಿಹಿಯನ್ನು ತಿನ್ನಬೇಕೆನಿಸುತ್ತದೆ ಆದರೆ ಎಲ್ಲರಂತೆ ತಿನ್ನುವ ಹಾಗಿಲ್ಲ ಜ್ಯೂಸನ್ನು ಕುಡಿಯುವ ಹಾಗಿಲ್ಲ ಆದರೆ ಮೆಂತೆಯನ್ನು ಯಾವ ಯಾವ ರೀತಿಯಲ್ಲಿ ಬಳಸಬಹುದು ಎಂಬ ಮಾಡುವ ಕ್ರಮವನ್ನು ತಿಳಿಸುತ್ತೇನೆ

ಮೆಂತೆ ಜ್ಯೂಸ್

4 ಚಮಚ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಡಬೇಕು ಅದಕ್ಕೆ ಎರಡು ಏಲಕ್ಕಿ ಹಾಕಿ ನುಣ್ಣಗೆ ಬೀಸಬೇಕು ಅದಕ್ಕೆ 2 ಚಮಚ ಬೆಲ್ಲ ಅರ್ಧಲೋಟ ಹಾಲು ಅಥವಾ ತೆಂಗಿನ ಹಾಲು ಅರ್ಧ ಲೋಟ ಮತ್ತು ನೀರನ್ನು ಹಾಕಬಹುದು ಜ್ಯೂಸು ದಪ್ಪವಾದ ಬೇಕೆಂದರೆ 2 ಚಮಚ ಮೆಂತೆ ಕಾಳನ್ನು ಜಾಸ್ತಿ ಹಾಕಬೇಕು ಇದನ್ನು ಬೀಸುವಾಗ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಇರಬೇಕು ಇದಕ್ಕೆ ಬೆಲ್ಲ ಬೇಡವೆಂದರೆ ಚಿಟಿಕೆ ಉಪ್ಪನ್ನು ಹಾಕಬಹುದು

ಎಲ್ಲರಂತೆ ಡಯಾಬಿಟಿಸ್ ಇದ್ದವರು  ಕುಡಿಯಬಹುದು ಬೆಳಿಗ್ಗೆ ಒಂದು ಲೋಟ ಸಂಜೆ ಒಂದು ಲೋಟ ಕುಡಿಯಬಹುದು ಅಲರ್ಜಿ ಇದ್ದವರು ಅರ್ಧ ಲೋಟ  ಕುಡಿಯಬಹುದು

ಮೆಂತೆ ಹಿಟ್ಟು

ಅರ್ಧ ಕಪ್ಪು ಮೆಂತೆ ಅರ್ಧ ಕಪ್ಪು ್ದ ಉದ್ದು ಅರ್ಧ ಕಪ್ ಹೆಸರುಕಾಳು ಒಂದು ಕಪ್ಪು ಕಡಲೆಬೇಳೆ ಒಂದು ಕಪ್ಪು ಎಳ್ಳು ಜೀರಿಗೆ ಅರ್ಧ ಕಪ್ 4 ಚಮಚ ಮೆಣಸಿನ ಕಾಳು ಒಂದು ಚಮಚ ಓಂಕಾಳು ಇವೆಲ್ಲವನ್ನೂ ಬೇರೆಬೇರೆಯಾಗಿ ಹುರಿದು ಒಂದು ಚಮಚ ಉಪ್ಪು ಇವೆಲ್ಲವನ್ನು ಸೇರಿಸಿ ಹಿಟ್ಟು ಮಾಡಬೇಕು ಬೇರೆಬೇರೆ  ಧಾನ್ಯಗಳನ್ನು  ಸೇರಿಸಬಹುದು  ಆಗ  ಮೆಂತೆಯ ಪ್ರಮಾಣವನ್ನು  ಜಾಸ್ತಿ ಮಾಡಬೇಕು.

ಹಿಟ್ಟನ್ನು  ಒಂದು ಬಾಕ್ಸ್ ನಲ್ಲಿ ಗಾಳಿಯಾಡದಂತೆ  ತುಂಬಿ ಇಟ್ಟರೆ  ಒಂದು ತಿಂಗಳು  ಇರುತ್ತದೆ ಈ ಎಲ್ಲವನ್ನೂ ಸೇರಿಸಿ ಮಾಡಿದ ಹಿಟ್ಟಿಗೆ  ಮೆಂತೆ ಹಿಟ್ಟು ಎನ್ನುವರು
ದಿನಾಲು 1 ಚಮಚ ಮೆಂತೆ ಹಿಟ್ಟನ್ನು ಸ್ವಲ್ಪ ತುಪ್ಪದೊಂದಿಗೆ ಅನ್ನದ ಜೊತೆಗೆ ಸೇರಿಸಿ ಊಟ ಮಾಡಬೇಕು ಅವರ ಆಹಾರ ಯಾವುದು ಅದರ ಜೊತೆಗೆ ಸೇರಿಸಿ ತಿನ್ನಬಹುದು ಇದು ಡಯಾಬಿಟಿಸ್ ಇದ್ದವರಿಗೆ ಒಳ್ಳೆಯದು ಇದನ್ನು ಎಲ್ಲರೂ ತಿನ್ನಬಹುದು

ಮೆಂತೆ ನೀರು

ರಾತ್ರಿ ಅರ್ಧ ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಬೇಕು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತೆಕಾಳನ್ನು ಇಡಿಯಾಗಿ ನುಂಗಿ ಆ ನೀರನ್ನು ಕುಡಿಯಬೇಕು

ಡಯಾಬಿಟಿಸ್ ಇದ್ದವರಿಗೆ ಒಳ್ಳೆಯದು ಮಂಡಿ ನೋವಿಗೂ ಇದು ತುಂಬಾ ಒಳ್ಳೆಯದು

ಮೆಂತೆ ದೋಸೆ

ಒಂದು ಲೋಟ ಅಕ್ಕಿ ಅಥವಾ ಯಾವುದೇ ದಾನ್ಯ ಅದಕ್ಕೆ 2 ಚಮಚ ಮೆಂತೆ ಮೂರು ತಾಸು  ನೀರಿನಲ್ಲಿ ನೆನೆಸಿಡಬೇಕು ರಾತ್ರಿ ಮಿಕ್ಸರ್ ನಲ್ಲಿ ಬೀಸಿ ಬೆಳಿಗ್ಗೆ ದೋಸೆ ಮಾಡಿದರೆ ತುಂಬಾ ರುಚಿ ಗರಿಗರಿಯಾದ ದೋಸೆ ಆಗುತ್ತದೆ ಹಿಟ್ಟಿಗೆ ಸ್ವಲ್ಪ ಉಪ್ಪು ಬೆಲ್ಲ ಬೇಕಾದರೆ ಹಾಕಬಹುದು .

ಮೆಂತೆ ಸೊಪ್ಪಿನಿಂದ ಲು ದೋಸೆ ಮಾಡಬಹುದು ಅಥವಾ ರೊಟ್ಟಿ ಮಾಡಬಹುದು.

 

ಮೆಂತೆ ಇಡ್ಲಿ

ಮೆಂತೆ ಇಡ್ಲಿಯೋ ತುಂಬಾ ರುಚಿಕರವಾದ ತಿಂಡಿ ಇದನ್ನು ಬೆಳಿಗ್ಗೆ ಮಾಡಬಹುದು. ಇದಕ್ಕೆ ಬೇಕಾಗುವ ಸಾಮಾನುಗಳು.

ಅರ್ಧ ಲೋಟ ಮೆಂತೆ ನೀರಲ್ಲಿ ಎರಡು ತಾಸು ನೆನಸಬೇಕು .ನಂತರ ಅದನ್ನು ನುಣ್ಣಗೆ ಬೀಸಬೇಕ .ಅದಕ್ಕೆ ಒಂದು ಲೋಟ ಅಕ್ಕಿ ರವಾ ಅಥವಾ ಇಡ್ಲಿ ರವ ಹಾಕಬೇಕು. ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ರುಚಿಗೆ ಬೇಕಾದಷ್ಟು ಬೆಲ್ಲ ಹಾಕಬೇಕು .ಅದಕ್ಕೆ ಗೋಡಂಬಿ ಬಾದಾಮಿ ಶೇಂಗಾ ಚಿಕ್ಕ ಪೀಸುಗಳನ್ನು ಮಾಡಿ ಹಾಕಬೇಕು .

ಇಡ್ಲಿ ಕುಕ್ಕರ್ ನಲ್ಲಿ ಬೇಯಿಸಬೇಕು ಇದು ತುಂಬಾ ರುಚಿಕರವಾಗಿ ಮತ್ತು ಪರಿಮಳಯುಕ್ತ ವಾಗಿರುತ್ತದೆ ಆರೋಗ್ಯಕ್ಕೂ ಒಳ್ಳೆಯದು.

ಮೆಂತೆ ಎರಿಎವು ಅಥವಾ ಎಣ್ಣೆ ಮುಳುಕ

ಒಂದು ಲೋಟ ಅಕ್ಕಿ ಗೆ ಅರ್ಧ ಲೋಟ ಮೆಂತೆಯನ್ನು ಹಾಕಿ ಮೂರು ತಾಸು ನೆನಸಬೇಕು. ಅದಕ್ಕೆ ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಬೀಸಬೇಕು .ದೋಸೆ ಹಿಟ್ಟಿನಂತೆ ಇರಬೇಕು .ಬೀಸುವಾಗ ತೆಂಗಿನಕಾಯಿ ತುರಿಯನ್ನು ಒಂದು ಹುಟ್ಟು ಹಾಕಬಹುದು.

ಚಿಕ್ಕ ಬಂಡಿಗೆ ಎಣ್ಣೆ ಹಾಕಿ ಸ್ಟೋನ ಮೇಲೆ ಇಟ್ಟಿರಿ ಎಣ್ಣೆ ಕಾದ ನಂತರ ಒಂದು ಹುಟ್ಟು ಹಿಟ್ಟನ್ನು ಬಂಡಿಗೆ ಹಾಕಬೇಕು ಬಂಡಿಯಲ್ಲಿ ಅದು ಕೆಂಪಗೆ ಬೆಂದನಂತರ ತೆಗೆದು ಬಿಸಿಬಿಸಿಯಾಗಿ ತಿಂದರೆ ರುಚಿಯೋ ರುಚಿ ಅದರಲ್ಲಿ ಎಣ್ಣೆ ಜಾಸ್ತಿ ಎನಿಸಿದರೆ ಹಿಂಡಬಹುದು.

ಕಡಿಗಾಯಿ( ಉಪ್ಪಿನಕಾಯಿ)

ಮಾವಿನಕಾಯಿ ಹೋಳು ಎರಡು ಲೋಟ, ಜೀರಿಗೆ 1ಹುಟ್ಟು ಸಾಸಿವೆ ಎರಡು ಹುಟ್ಟು , 4 ಲವಂಗ, ಓಂಕಾಳು ಎರಡು ಚಮಚ ,ಸ್ವಲ್ಪ ಉಪ್ಪು .ಜೀರಿಗೆ ಸಾಸಿವೆ ಲವಂಗ ಓಂಕಾಳು ಇವಿಷ್ಟನ್ನು ಹುರಿದು ಹಿಟ್ಟು ಮಾಡಿ ಮಾವಿನಕಾಯಿಗೆ ಹಾಕಬೇಕು ಒಂದು ಕಪ್ ಕಾರವಾದ ಮೆಣಸಿನ ಹಿಟ್ಟನ್ನು ಹಾಕಬೇಕು.

ನಂತರ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ 1 ಹುಟ್ಟು ಮೆಂತೆಯನ್ನು ಹಾಕಿ ಕೆಂಪಗಾದ ನಂತರ ಅದನ್ನು ಅದು ತಣ್ಣಗಾದ ಮೇಲೆ ಮಾವಿನಕಾಯಿಗೆ ಹಾಕಿ ಸೇರಿಸಬೇಕು.

ಎಲ್ಲವನ್ನು ಸರಿಯಾಗಿ ಕಲಿಸಿ ಭರಣಿಯಲ್ಲಿ ಗಾಳಿಯಾಡದಂತೆ ಮುಚ್ಚಿರಬೇಕು. ಇದು ತುಂಬಾ ರುಚಿಯಾಗಿರುತ್ತದೆ. ಮತ್ತು ಡಯಾಬಿಟೀಸ್ ನವರಿಗೆ ಒಳ್ಳೆಯದು ಇದು 4 ದಿವಸದ ನಂತರ ತಿನ್ನಲಿಕ್ಕೆ ರುಚಿಯಾಗಿರುತ್ತದೆ ಇದರಲ್ಲಿರುವ ಮೆಂತೆಯು : ಉಪ್ಪು ಕಾರ ಮತ್ತು ಎಣ್ಣೆಯನ್ನು ಕುಡಿದು ತುಂಬಾ ರುಚಿಯಾಗಿರುತ್ತದೆ.

Leave a Reply