ಶುಂಠಿ

ಶುಂಠಿಯೂ ನೆಲದೆಡೆಗೆ ಬೆಳೆಯುವ ಗಡ್ಡೆ. ಇದು ಸ್ವಲ್ಪ ಕಾರವಾಗಿರುತ್ತದೆ .ಆಯುರ್ವೇದ ಔಷಧಿಗಳಲ್ಲಿ ಶುಂಠಿಯೂ ಮಹತ್ವದ ಸ್ಥಾನವನ್ನು ಪಡೆದಿದೆ .ಹಸಿವನ್ನು ಹೆಚ್ಚಿಸುತ್ತದೆ. ಅಂದರೆ ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ .ನೆಗಡಿಗೆ, ಜ್ವರಕ್ಕೆ, ಅಜೀರ್ಣವಾದಾಗ, ಜಂತುಹುಳು ವಾದಾಗ ಶುಂಠಿಯನ್ನು ಬಳಸುತ್ತಾರೆ .ಶುಂಠಿಯನ್ನು ನಿತ್ಯವೂ ಅಡುಗೆಗೆ ಸ್ವಲ್ಪ ಬಳಸಿದರೆ ಒಳ್ಳೆಯದು. ಕಷಾಯವು ಮೈಕೈ ನೋವಿಗೆ ಒಳ್ಳೆಯದು. ಶುಂಠಿಯನ್ನು ಕಷಾಯ ಮಾಡಿಕೊಂಡು ಹದಿನೈದು ದಿವಸ ಸತತವಾಗಿ ತೆಗೆದುಕೊಂಡರೆ ನೋವನ್ನು ಕಡಿಮೆ ಮಾಡುತ್ತದೆ .ಹೊಟ್ಟೆಯಲ್ಲಿ ಗ್ಯಾಸ್ ಆದಾಗ ಶುಂಠಿಯ ಜೊತೆಗೆ ಜೀರಿಗೆಯನ್ನು ಸೇರಿಸಿ ತಿಂದರೆ ಕಡಿಮೆಯಾಗುತ್ತದ. ವೈರಸ್ನಿಂದ ಬರುವಂತಹ ರೋಗಗಳಿಗೆ ಶುಂಠಿಯನ್ನು ಬಳಸಬೇಕು.

ಮೊದಲನೆಯ ರೀತಿ

ನಾಲ್ಕು ಇಂಚು ಶುಂಠಿ ,ಹತ್ತು ಎಲೆ ತುಳಸಿ ಕೊತ್ತುಂಬರಿ 1ಹುಟ್ಟು ,ಮೆಣಸಿನ ಕಾಳು ಚಮಚ, ಜೀರಿಗೆ 1 ಚಮಚ, ನಿಂಬು ರಸ ರುಚಿಗೆ ತಕ್ಕಷ್ಟು ಇವೆಲ್ಲವುಗಳನ್ನು ಜಜ್ಜಿ ಅಥವಾ ಹಿಟ್ಟು ಮಾಡಿ ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಬೇಕು. ಹತ್ತು ಇರಬೇಕು ಅದಕ್ಕೆ ಬೆಲ್ಲ ನಿಂಬೆರಸ ಹಾಕಿ ಒಂದು ಲೋಟವನ್ನು ಕುಡಿಯಬೇಕು .ಇದು ನೆಗಡಿಗೆ ಮೈಕೈ ನೋವಿಗೆ ಸಣ್ಣ ಜ್ವರಕ್ಕೆ ಒಳ್ಳೆಯದು.

ಎರಡನೇ ರೀತಿ

5 ಇಂಚು ಶುಂಠಿ ,2 ಚಮಚ ಹುರಿದ ಜೀರಿಗೆ ,1 ಚಮಚ ಮೆಣಸಿನ ಕಾಳು , ಒಂದು ಕಪ್ಪು ತೆಂಗಿನತುರಿ ,1 ಕಪ್ ಮಜ್ಜಿಗೆ ,4 ಚಮಚ ನಿಂಬೆರಸ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಇವೆಲ್ಲವನ್ನು ಬೀಸಬೇಕು. ಒಟ್ಟು ನಾಲ್ಕು ಲೋಟ ಮಾಡಬಹುದು. ಅಂದರೆ ಸ್ವಲ್ಪ ನೀರನ್ನು ಸೇರಿಸಬೇಕು .ಇದು ಕುಡಿಯಲು ತುಂಬಾ ರುಚಿಕರವಾಗಿರುತ್ತದೆ .ಊಟದ ಜೊತೆಗೂ ಕುಡಿಯಬಹುದು .ಅಥವಾ ಅನ್ನದ ಜೊತೆಗೆ ಸೇರಿಸಿ ತಿನ್ನಬಹುದು .

Leave a Reply