ಸಾಂಬಾರ್ ಬಟ್ಟಲು

ಹಿಂದುಸ್ತಾನದಲ್ಲಿ ಪ್ರತಿಮನೆಯಲ್ಲೂ ಸಾಂಬಾರು ಬಟ್ಟಲು ಎಂಬುದು ಇರಲೇಬೇಕು. ಇದ್ದೇ ಇರುತ್ತದೆ ಸಾಂಬಾರ ಬಟ್ಟಲು ಎಂದರೆ ಗೋಲಾಕಾರದ ಒಂದು ವೂಟ ವ್ಯಾಸದ ಕರಡಿಗೆಯಲ್ಲಿ ಚಿಕ್ಕ ಚಿಕ್ಕ ಲೋಟಗಳನ್ನು ಇಡಬೇಕು .ಕರದಿಗೆಯಲ್ಲಿ ಕೊತ್ತುಂಬರಿ, ಜೀರಿಗೆ ,ಮೆಂತೆ, ಸಾಸಿವ,ೆ ಎಳ್ಳು, ಉದ್ದಿನಬೇಳೆ ,ಇಂಗು ,ಅರಿಸಿನ ಹಿಟ್ಟು ಇರಿಸಬೇಕು ಮತ್ತೊಂದು ಕರಡಿಗೆಯಲ್ಲಿ ಲವಂಗ ,ಏಲಕ್ಕಿ, ದಾಲ್ಚಿನ,ಚಕ್ರ ಮೊಗ್ಗು ,ಬಡೆಸೊಪ್ಪು ,ಗಸಗಸೆ, ಅರಿಸಿನ, ಇಂಗು ಇರಬೇಕು .

ಹಿಂದುಸ್ತಾನದಲ್ಲಿ ಅಂದರೆ ನಮ್ಮ ದೇಶದಲ್ಲಿ ಸಾಂಬಾರ ಬೆಟ್ಟದಲ್ಲಿರುವ ಎಲ್ಲವನ್ನೂ ದಿನಾಲು ಉಪಯೋಗಿಸುತ್ತಾರೆ .ಸಾಂಬಾರ ಬಟ್ಟಲು ಎಂದರೆ ಔಷಧಗಳ ಆಗರ .ಅದು ದೇಹವನ್ನು ಸಮಸ್ಥಿತಿಯಲ್ಲಿ ಇಡುತ್ತದೆ .ಸಾಂಬಾರ ಬಟ್ಟಲಲ್ಲಿ ಇರುವ ಪ್ರತಿಯೊಂದು ಧಾನ್ಯವು ಔಷಧ ಗುಣಗಳನ್ನು ಹೊಂದಿವೆ .ನಿತ್ಯವೂ ಸಾಂಬಾರ್ ಮಾಡಲು ಇವೆಲ್ಲವೂ ಬೇಕೇ ಬೇಕು .ಸಾಂಬಾರು ಮಾಡುವಾಗ ಅದಕ್ಕೆ ಬೇಕಾಗುವ ಸಾಮಾನುಗಳನ್ನು ಸುಲಭವಾಗಿ ಹಾಕಲು ಇದು ಅನುಕೂಲವಾಗಿದೆ. ಒಂದೇ ಕಡೆ ಎಲ್ಲವೂ ಇರುವುದರಿಂದ ಸುಲಭವಾಗಿ ವೇಗವಾಗಿ ಸಾಂಬಾರ್ ಮಾಡಲು ಇದು ಸಾಧ್ಯವಾಗಿದೆ.

Leave a Reply