ಶುಂಠಿ
ಶುಂಠಿಯೂ ನೆಲದೆಡೆಗೆ ಬೆಳೆಯುವ ಗಡ್ಡೆ. ಇದು ಸ್ವಲ್ಪ ಕಾರವಾಗಿರುತ್ತದೆ .ಆಯುರ್ವೇದ ಔಷಧಿಗಳಲ್ಲಿ ಶುಂಠಿಯೂ ಮಹತ್ವದ ಸ್ಥಾನವನ್ನು ಪಡೆದಿದೆ .ಹಸಿವನ್ನು ಹೆಚ್ಚಿಸುತ್ತದೆ. ಅಂದರೆ ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ .ನೆಗಡಿಗೆ, ಜ್ವರಕ್ಕೆ, ಅಜೀರ್ಣವಾದಾಗ, ಜಂತುಹುಳು ವಾದಾಗ ಶುಂಠಿಯನ್ನು ಬಳಸುತ್ತಾರೆ .ಶುಂಠಿಯನ್ನು ನಿತ್ಯವೂ ಅಡುಗೆಗೆ ಸ್ವಲ್ಪ ಬಳಸಿದರೆ ಒಳ್ಳೆಯದು. ಕಷಾಯವು ಮೈಕೈ ನೋವಿಗೆ ಒಳ್ಳೆಯದು. ಶುಂಠಿಯನ್ನು ಕಷಾಯ ಮಾಡಿಕೊಂಡು ಹದಿನೈದು ದಿವಸ ಸತತವಾಗಿ ತೆಗೆದುಕೊಂಡರೆ ನೋವನ್ನು ಕಡಿಮೆ ಮಾಡುತ್ತದೆ .ಹೊಟ್ಟೆಯಲ್ಲಿ ಗ್ಯಾಸ್ ಆದಾಗ ಶುಂಠಿಯ ಜೊತೆಗೆ ಜೀರಿಗೆಯನ್ನು ಸೇರಿಸಿ ತಿಂದರೆ ಕಡಿಮೆಯಾಗುತ್ತದ. ವೈರಸ್ನಿಂದ …